ಸಂತ ಅಲೋಶಿಯಸ್ ಕಾಲೇಜು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಹೃದಯ ಭಾಗದಲ್ಲಿದೆ. ನಗರದ ಪ್ರತಿಷ್ಠಿತ ಕಾಲೇಜುಗಳಲ್ಲಿ ಈ ಕಾಲೇಜು ಪ್ರಮುಖವಾದುದು ಎಂದು ಗುರುತಿಸಿಕೊಂಡಿದೆ. ಇತ್ತೀಚೆಗೆ ನ್ಯಾಕ್ ೩.೬೨ ಅಂಕ ಪಡೆದು ಉತ್ತಮ ಶ್ರೇಣಿಯಲ್ಲಿ ಮಾನ್ಯತೆ ಪಡೆದು, ರಾಜ್ಯದ ಪ್ರಮುಖ ೫ ಸಂಸ್ಥೆಗಳಲ್ಲಿ ಒಂದೆಂದು ಗುರುತಿಸಿಕೊಂಡಿದೆ. ದೇಶದ ೧೦೦ ಕಾಲೇಜುಗಳಲ್ಲಿ ಸಂತ ಅಲೋಶಿಯಸ್ ಕಾಲೇಜು ಗುರುತಿಸಿಕೊಂಡಿದೆ.

ಕಾಲೇಜಿನ ಚರಿತ್ರೆ[ಬದಲಾಯಿಸಿ]

बदल

ಸಂತ ಅಲೋಶಿಯಸ್ ಕಾಲೇಜು 1880ರಲ್ಲಿ ಆರಂಭವಾಯಿತು. ಸಂತ ಅಲೋಶಿಯಸ್ ಕಾಲೇಜು ಎಂಬ ಹೆಸರಿನಲ್ಲಿ ಆರಂಭವಾದ ಈ ಸಂಸ್ಥೆಯು ಪ್ರಾಥಮಿಕ, ಮಾಧ್ಯಮಿಕ, ಪ್ರೌಢ, ಪದವಿ ಪೂರ್ವ, ಪದವಿ, ಸ್ನಾತಕೋತ್ತರ ಹೀಗೆ ಹಲವು ಸಂಸ್ಥೆಗಳನ್ನು ಹೊಂದಿದೆ. ಈ ಕಾಲೇಜಿಗೆ ೧೩೬ ವರ್ಷಗಳ ಇತಿಹಾಸವಿದೆ. 2007ರಲ್ಲಿ ಸಂತ ಅಲೋಶಿಯಸ್ ಕಾಲೇಜು ಸ್ವಾಯತ್ತ ಸಂಸ್ಥೆಯಾಗಿ ಬೆಳೆದು ನಿಂತಿದೆ. ಪ್ರಸ್ತುತ ಈ ಕಾಲೇಜಿನ ಪದವಿ ತರಗತಿಗಳಲ್ಲಿ ೪೦00ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ.

"https://gom.wikipedia.org/w/index.php?title=वापरपी:Mitcheljoseph/sandbox1&oldid=164888" चे कडल्यान परतून मेळयलें